ಅಭಿಪ್ರಾಯ / ಸಲಹೆಗಳು

ನಿರ್ದೇಶಕರ ಸಂದೇಶ

ಡಾ. ಸಂಜಯ್.‌ ಕೆ. ಎಸ್.‌,

ಎಂಬಿಬಿಎಸ್‌, ಎಂಡಿ (ಶಿಶು ವೈದ್ಯಶಾಸ್ತ್ರ)

ನಿರ್ದೇಶಕರು ಹಾಗೂ ಪ್ರಾಧ್ಯಾಪಕರು (ಶಿಶು ವೈದ್ಯಶಾಸ್ತ್ರ)

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು 1995ರಲ್ಲಿ ಡಾ|| ಡಿ.ಜಿ.ಬೆನಕಪ್ಪರವರಿಂದ ಪ್ರಾರಂಭವಾದ ಈ ಸಂಸ್ಥೆಯು ವಿಶೇಷವಾಗಿ ಮಕ್ಕಳಿಗಾಗಿಯೇ ಇರುವ ರಾಜ್ಯದ ಏಕೈಕ ಆರೋಗ್ಯ ಸಂಸ್ಥೆಯಾಗಿದೆ. ಅಂದಿನಿಂದಲೂ ಉಚಿತವಾಗಿ ಅಥವಾ ಅತ್ಯಲ್ಪ ಶುಲ್ಕವನ್ನು ಪಡೆದು ಕರ್ನಾಟಕ ರಾಜ್ಯ ಮತ್ತು ದೇಶದ ವಿವಿಧ  ಭಾಗಗಳಿಂದ ಬರುವ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದೆ. ಪ್ರಸ್ತುತ ಸಂಸ್ಥಯು 500 ಹಾಸಿಗೆಗಳ ಸಾಮಾರ್ಥ್ಯವನ್ನು ಹೊಂದಿದೆ. ರೋಗವುಳ್ಳ  ಮಕ್ಕಳಿಗೆ ಸಮಗ್ರ ಮತ್ತು ಗುಣಮಟ್ಟದ ಚಿಕಿತ್ಸಾ ಪಾಲನೆ ಒದಗಿಸುವ ದೂರದೃಷ್ಟಿಯೊಂದಿಗೆ ಶಿಶು ಶಸ್ತ್ರಚಿಕಿತ್ಸೆ, ಮಕ್ಕಳ ನರರೋಗ ಚಿಕಿತ್ಸೆ, ಮಕ್ಕಳ ಅಸ್ಥಿ ಚಿಕಿತ್ಸೆ, ಕ್ಲಿನಿಕಲ್‌ ಜೆನೆಟಿಕ್ಸ್‌, ಹೃದ್ರೋಗಶಾಸ್ತ್ರ ಹೀಗೆ 22 ರೀತಿಯ ಚಿಕಿತ್ಸೆಗಳನ್ನು ನಮ್ಮ ಸಂಸ್ಥೆ ನೀಡುತ್ತಿದೆ. ಶಿಶು ವೈದ್ಯಶಾಸ್ತ್ರ, ನವಜಾತ ಶಿಶು ವೈದ್ಯಶಾಸ್ತ್ರ, ನರರೋಗಶಾಸ್ತ್ರ, ಮೂತರ್ಪಿಂಡಶಾಸ್ತ್ರ, ಶಿಶು ಶಸ್ತ್ರಚಿಕಿತ್ಸಾ ಶಾಸ್ತ್ರ, ಅರವಳಿಕೆ ಶಾಸ್ತ್ರ, ಶಿಶು ಅಸ್ಥಿ ಚಿಕಿತ್ಸಾಶಾಸ್ತ್ರ, ಶಿಶು ಇಎನ್‌ ಟಿ ವಿಭಾಗಗಳನ್ನು ಹೊಂದಿದ್ದು ಎಲ್ಲಾ ವಿಭಾಗಗಳಲ್ಲೂ ನುರಿತ ವೈದ್ಯರುಗಳ ತಂಡ ಚಿಕಿಸ್ತೆ ನೀಡುತ್ತಿದೆ. ಅಂತೆಯೇ ವಿಕಿರಣಶಾಸ್ತ್ರ, ರೋಗಲಕ್ಷಣಶಾಸ್ತ್ರ, ಸೂಕ್ಷ್ಮ ಜೀವ ವಿಜ್ಞಾನ, ಜೀವರಸಾಯನ ಶಾಸ್ತ್ರ ಒಳಗೊಂಡಂತೆ ಸುವ್ಯವಸ್ಥಿತ ಪ್ರಯೋಗಾಲಯಗಳನ್ನು ಹೊಂದಿದ್ದು  ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ ವರದಿಗಳೊಂದಿಗೆ ಸೂಕ್ತ ಸಲಹೆಗಳನ್ನು ನೀಡಲು ಅನುಕೂಲತೆಯನ್ನು  ರೋಗಿಗಳಿಗೆ ಒದಗಿಸಲಾಗುತ್ತದೆ. ಅಲ್ಲದೇ ತುರ್ತು ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಉತ್ತಮ ಅತ್ಯಾಧುನಿಕ  ಸಲಕರಣೆಗಳನ್ನು ಹೊಂದಿದ್ದು. ಶಿಶು ತೀವ್ರ ನಿಗಾ ಘಟಕ,(ಪಿಐಸಿಯು), ನವಜಾತ ಶಿಶು ತೀವ್ರನಿಗಾ ಘಟಕ(ಎನ್‌ ಐಸಿಯು) ಮತ್ತು ಅನಾರೋಗ್ಯ ನವಜಾತ ಶಿಶು ಆರೈಕೆ ಘಟಕ(ಎಸ್‌ ಎನ್‌ ಸಿಯು)ಗಳನ್ನು ಹೊಂದಿದ್ದು ಗುಣಮಟ್ಟದ ಚಿಕಿತ್ಸೆಯನ್ನು ಒಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.  ಅಲ್ಲದೇ ಸಂಸ್ಥೆಯು ತುರ್ತು ಚಿಕಿತ್ಸೆ, ತಾಯಂದಿರ ವಾರ್ಡ್‌ಗಳು, ವಿಶೇಷ ವಾರ್ಡ್ ಗಳು   ಸೇರಿದಂತೆ 10 ಒಳರೋಗಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಪ್ರತಿದಿನ ಸುಮಾರು 500 ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು ಅವರಲ್ಲಿ 70-80 ಮಕ್ಕಳು ಒಳರೋಗಿಗಳಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

 

ಮುಂದುವರೆದು, ಸಂಸ್ಥೆಯು 22 ಶಿಶು ವೈದ್ಯಶಾಸ್ತ್ರ ಮತ್ತು 8 ಶಿಶು ಶಸ್ತ್ರಚಿಕಿತ್ಸಾ ಶಾಸ್ತ್ರಗಳ ಸ್ನಾತಕೋತ್ತರ ಕೋರ್ಸುಗಳನ್ನು ನಡೆಸುತ್ತಿದ್ದು, ಅದರೊಂದಿಗೆ ವಿವಿಧ ಸಂಶೋಧನಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 02-12-2021 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080